04
Jul

ದೇವನಹಳ್ಳಿ ಮತ್ತು ಇತರೆಡೆ ಬಲವಂತದ ಭೂಸ್ವಾಧೀನವನ್ನು ತಕ್ಷಣ ನಿಲ್ಲಿಸಿ

———- Forwarded message ———
From: ASHA Kisan Swaraj<asha.kisanswaraj@gmail.com>
Date: Fri, Jul 4, 2025 at 12:32 PM
Subject: Sub: ದೇವನಹಳ್ಳಿ ಮತ್ತು ಇತರೆಡೆ ಬಲವಂತದ ಭೂಸ್ವಾಧೀನವನ್ನು ತಕ್ಷಣ ನಿಲ್ಲಿಸಿ
To: <cm.kar@nic.in>

ಪ್ರಿಯ ಶ್ರೀ ಸಿದ್ದರಾಮಯ್ಯ ಅವರೇ,

ನಮಸ್ಕಾರ. ಫಲವತ್ತಾದ, ಜೀವನೋಪಾಯಕ್ಕೆ ಆಧಾರವಾಗಿರುವ ಕೃಷಿ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧ ದೇವನಹಳ್ಳಿ ರೈತರು ನಡೆಸಿದ ಹೋರಾಟವನ್ನು ನಿರ್ಲಕ್ಷಿಸುವ ಮೂಲಕ ಕರ್ನಾಟಕ ಸರ್ಕಾರವು 1000 ದಿನಗಳಿಂದ  ಸಾಕಷ್ಟು ಅನ್ಯಾಯ ಮಾಡಿದೆ. ನಮ್ಮ ಅನ್ನದಾತರ ಮೇಲೆ ಶೋಷಣೆ ನಡೆಸುತ್ತಿದೆ .

ನೀವು ವಿರೋಧ ಪಕ್ಷದಲ್ಲಿದ್ದಾಗ ದೇವನಹಳ್ಳಿ ಹೋರಾಟಕ್ಕೆ ನೀಡಿದ ಬೆಂಬಲ ಕೇವಲ ಸೋಗು ಮತ್ತು ಸ್ವಾರ್ಥಪರ ನಿಲುವು ಎಂದು ಜನರು ಭಾವಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲದಂತೆ ನಡೆದುಕೊಳ್ಳುತ್ತಿದ್ದೀರಿ . ಕರ್ನಾಟಕದಂತಹ ರಾಜ್ಯಗಳಲ್ಲಿ ಅಧಿಕಾರದಲ್ಲಿರುವಾಗ 2013 ರಲ್ಲಿ LARR ((Land Acquisition, Resettlement and Resettlement Act or Right to Fair Compensation and Transparency in Land Acquisition, Rehabilitation and Resettlement Act, 2013) ಕಾಯ್ದೆಯನ್ನು ತಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ತನ್ನ ಹೆಗ್ಗುರುತೊಂದನ್ನು ದುರ್ಬಲಗೊಳಿಸುತ್ತಿದೆ, ಅಸಮಂಜಸ ನೀತಿ ವಿಧಾನಗಳನ್ನು ಪ್ರದರ್ಶಿಸುತ್ತಿದೆ. 

ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಂತೆಯೇ, ಬಲವಂತದ ಭೂಸ್ವಾಧೀನವು ಕೂಡ ಕಾನೂನುಬಾಹಿರವಾಗಿದೆ. ಇದು ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರದಲ್ಲಿ ಅಧಿಕಾರದಲ್ಲಿದ್ದಾಗ ತಂದ ಕಾನೂನಿನ ಮೂಲ ಆಶಯಕ್ಕೇ ಧಕ್ಕೆಯುಂಟುಮಾಡುತ್ತದೆ. 2017 ರ ಸಿಎಜಿ ವರದಿಯು ಈ ಹಿಂದೆ ಸ್ವಾಧೀನಪಡಿಸಿಕೊಂಡ 30,000 ಎಕರೆಗಳು ಬಳಕೆಯಾಗದೆ ಉಳಿದಿವೆ ಎಂದು ಸ್ಪಷ್ಟವಾಗಿ ಎತ್ತಿ ತೋರಿಸಿದೆ. ಅದು ಕೂಡ ಕಾನೂನುಬಾಹಿರ. 

ಭೂಸ್ವಾಧೀನಕ್ಕೆ ಸರಕಾರ ಕೊಡುವ ʻಪರಿಹಾರʼ ಎಂದು ಕರೆಯಲ್ಪಡುವ  ಯೋಜನೆ ಎಷ್ಟು ಅಲ್ಪಕಾಲಿಕವಾಗಿದೆ ಮತ್ತು ಅದು ಜೀವನೋಪಾಯವನ್ನು ಹೇಗೆ ನಾಶಮಾಡುತ್ತಿದೆ ಅಥವಾ ಪರ್ಯಾಯ ಜೀವನೋಪಾಯವನ್ನು ಒದಗಿಸುವುದಿಲ್ಲ ಎಂಬುದನ್ನು ಈ ಪ್ರದೇಶದ ರೈತರು ಈಗಾಗಲೇ ಅರ್ಥಮಾಡಿಕೊಂಡಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ಭೂಸ್ವಾಧೀನ ನಡೆಸಲು ರಾಜ್ಯದ “eminent domain”ದ ನೆಪವು ಏಕೆ ಹೆಚ್ಚು ಪ್ರಶ್ನಾರ್ಹವಾಗಿದೆ ಎಂಬುದನ್ನು ದೇವನಹಳ್ಳಿ ಭೂಸ್ವಾಧೀನ ಪ್ರಕರಣವು ಸ್ಪಷ್ಟವಾಗಿ ತೋರಿಸುತ್ತದೆ.

ಕಾಂಗ್ರೆಸ್‌ನಂತಹ ಪಕ್ಷವು ಇತರ ರಾಜಕೀಯ ಪಕ್ಷಗಳಿಗಿಂತ ಭಿನ್ನವಾಗಿದೆಯೇ ಎಂದು ತೋರಿಸಲು ಮತ್ತು ನೀವು ಪ್ರಗತಿಪರ, ಜನಪರ ನಾಯಕರೇ ಎಂದು ಸಾಬೀತುಪಡಿಸಲು ಹಿಂದೆ ರೈತರ ಹೋರಾಟಗಳಲ್ಲಿ ಅವರೊಂದಿಗೆ ನಿಂತ ನಿಮ್ಮಂತಹ ಸಮಾಜವಾದಿ ನಾಯಕನಿಗೆ ಈಗ ಸುಸಮಯ. ಮುಖ್ಯಮಂತ್ರಿಯಾಗಿ ಮತ್ತು ಅಧಿಕಾರದಲ್ಲಿರುವ ಪಕ್ಷವಾಗಿ ಕಾಂಗ್ರೆಸ್ ಪಕ್ಷವು ನಿಜವಾಗಿಯೂ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದೆ, ನಾಗರಿಕರ ಬದುಕುಳಿಯುವ ಹೋರಾಟಗಳಿಗೆ ಸ್ಪಂದಿಸುತ್ತಿದೆ ಮತ್ತು ಮೂಲಭೂತ ಸಾಂವಿಧಾನಿಕ ಬದುಕುವ ಹಕ್ಕನ್ನು ಎತ್ತಿಹಿಡಿಯುವಲ್ಲಿ ನೀವು ಈ ಕ್ಷಣ ಮತ್ತು ಅವಕಾಶವನ್ನು ಬಳಸಿಕೊಳ್ಳುತ್ತೀರಿ ಎಂದು ನಾವು ಭಾವಿಸುತ್ತೇವೆ. ದೇವನಹಳ್ಳಿ ಮತ್ತು ಇತರೆಡೆ ಬಲವಂತದ ಭೂಸ್ವಾಧೀನವನ್ನು ತಕ್ಷಣ ನಿಲ್ಲಿಸಿ.                                                                       

ವಿಶ್ವಾಸದಿಂದ,                                                                                                                                     

ಕವಿತಾ ಕುರುಗಂಟಿ, ಶಾರದಾ ಗೋಪಾಲ

ASHA-Karnataka (Alliance for Sustainable & Holistic Agriculture-Karnataka Chapter)

====================================

Alliance for Sustainable & Holistic Agriculture (ASHA-Kisan Swaraj)

FOOD – FARMERS – FREEDOM

www.kisanswaraj.in

Leave a Reply

You are donating to : Greennature Foundation

How much would you like to donate?
$10 $20 $30
Would you like to make regular donations? I would like to make donation(s)
How many times would you like this to recur? (including this payment) *
Name *
Last Name *
Email *
Phone
Address
Additional Note
paypalstripe
Loading...